ಸೂರ್ಯ ಅಂದ್ರೆ ಭೂಮಿಗೆ ಚೈತನ್ಯ. ಅದೆಷ್ಟೋ ವೋಲ್ಟ್ಗಳಷ್ಟು ಶಕ್ತಿಯನ್ನು ದಿನವೂ ಹೊರಚೆಲ್ಲೋ ಸೂರ್ಯನ ಮೇಲ್ಮೈ ಹೇಗಿರುತ್ತೆ ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಇಂಥ ಪ್ರಯತ್ನವೊಂದನ್ನು ನಾಸಾ ಮಾಡಿದೆ. ಸೂರ್ಯನ ಮೇಲ್ಮೈನಲ್ಲಿ ನಡೆಯೋ ಸೋಲಾರ್ ಫ್ಲೇರ್ ಅಂದ್ರೆ ಸೌರ ವಿದ್ಯಮಾನವನ್ನು ಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ಈ ವರ್ಷದ ಮೊದಲ ಅತ್ಯದ್ಭುತ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ. ಇದೇ ಸೋಮವಾರ ರಾತ್ರಿ 11.24ರ ಹೊತ್ತಿಗೆ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ.ಸೋಲಾರ್ ಡೈನಮಿಕ್ ಅಬ್ಸರ್ವೇಟರಿ ಎಂಬ ಸ್ಪೇಸ್ ಏಜೆನ್ಸಿ ಇದನ್ನ ಸೆರೆಹಿಡಿದಿದೆ. ಅತ್ಯಂತ ಪ್ರಖರವಾದ ಬೆಂಕಿಯುಂಡೆಗಳನ್ನು ಉಗುಳುತ್ತಿರುವ ಸೂರ್ಯನ ಅಪರೂಪದ ಚಿತ್ರ ವಿಜ್ಞಾನಿಗಳಲ್ಲಿ ಸಂತಸ ಮೂಡಿಸಿದೆ. ಈ ರೀತಿ ಬೆಂಕಿಯುಡೆ ಸಿಡಿಯುವ ಘಟನೆಗಳು ನಿತ್ಯವೂ ನಡೆಯುತ್ತಿರುತ್ತವೆ. ಆದ್ರೆ ಕೆಲವೊಮ್ಮೆ ಇದು ದೈತ್ಯ ಸ್ವರೂಪದಲ್ಲಿ ನಡೆಯುತ್ತೆ. ಸೂರ್ಯನಿಂದ ಸಿಡಿಯೋ ಅತಿನೇರಳೆ ಕಿರಣಗಳು ಭೂಮಿಯ ಕಾಂತಕ್ಷೇತ್ರವನ್ನು ದಾಟಲು ಸಾಧ್ಯವಾಗಲ್ಲ. ಅದ್ರೆ ಅತಿದೊಡ್ಡ ಸೌರ ವಿದ್ಯಮಾನ ಸಂಭವಿಸಿದರೆ ಕೆಲವೊಮ್ಮೆ ಉಪಗ್ರಹಗಳ ಕೆಲಸಕ್ಕೆ ಅಡ್ಡಿಯಾಗೋ ಸಾಧ್ಯತೆ ಇರುತ್ತೆ.
Wednesday, January 14, 2015
ಬೆಂಕಿ ಚೆಂಡು

Subscribe to:
Post Comments (Atom)

No comments:
Post a Comment