ಮತ್ತದೇ ಗುಲಾಮಗಿರಿ...!
Thursday, May 24, 2012
Thursday, April 5, 2012
ತೇಜಸ್ವಿ ಎಂಬ ಕೌತುಕ
'ಕುತೂಹಲದ ಜೊತೆ ಶ್ರದ್ಧೆ ಮಿಳಿತವಾದರೆ ಅಲ್ಲೊಬ್ಬ ತೇಜಸ್ವಿ ಇರುತ್ತಾರೆ'
ತೇಜಸ್ವಿ ಎಂಬ ವಿಸ್ಮಯ ಮರೆಯಾಗಿ ಇಂದಿಗೆ ಸರಿಯಾಗಿ 5 ವರ್ಷ. ಅವರು ಇಲ್ಲದ ನಾಡಿನಲ್ಲಿ ನಾವು ಭರ್ತಿ 5 ವರ್ಷಗಳನ್ನು ಕಳೆದುಬಿಟ್ಟಿದ್ದೇವೆ. ಅವರು ದೈಹಿಕವಾಗಿ ಇಲ್ಲದಿದ್ದರೂ ನಮ್ಮೊಂದಿಗೆ ಸದಾ ಇರುತ್ತಾರೆ ಎಂಬ ಮಾತಿನಲ್ಲಿ ಸತ್ಯ ಇಲ್ಲದಿಲ್ಲ. ಅವರು ತಮ್ಮ ಸಹಜ ಬರವಣಿಗೆ ಮೂಲಕ ನಮ್ಮನ್ನು ಇನ್ನೂ ಚಕಿತಗೊಳಿಸುತ್ತಲೇ ಇದ್ದಾರೆ, ಮುಂದೆಯೂ ಇರುತ್ತಾರೆ.
-ಅಮೃತ ಕಿರಣ. ಬಿ.ಎಂ.

'ಕನ್ನಡದಲ್ಲಿ ಏನೂ ಇಲ್ಲ, ಇರುವುದೆಲ್ಲವೂ ಬೂಸಾ ಎನ್ನುವವರು ಹಾಗೂ ಕನ್ನಡದಲ್ಲಿ ಸರ್ವಸಮಸ್ತವೂ ಇದೆ ಎನ್ನುವವರು ಕೊಂಚ ವಿವೇಕ ತೋರಿ ಮೌನವಹಿಸಿದರೆ ನಮ್ಮ ಅಗಾಧ ರಚನಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಲು ತುಂಬಾ ಅನುಕೂಲವಾಗುತ್ತದೆ' - ಇದು ಪೂರ್ಣಚಂದ್ರ ತೇಜಸ್ವಿ ಅವರ ಮನವಿಪೂರ್ವಕ ಆಗ್ರಹ. ಮಾಡುವುದನ್ನು ಬಿಟ್ಟು ಕೇವಲ ಆಡುವುದರಲ್ಲೇ ಕಾಲಕಳೆದು ದೊಡ್ಡವರೆನಿಸಿಕೊಳ್ಳಲು ಯತ್ನಿಸುವ 'ಬುದ್ಧಿಜೀವಿ'ಗಳಿಗೆ ತೇಜಸ್ವಿ ಬಿಸಿ ಮುಟ್ಟಿಸಿದ್ದಾರೆ.
ಯಾವುದೇ ಪ್ರಶಸ್ತಿಗೆ ಅಪೇಕ್ಷೆ ಪಡೆದೆ, ಪ್ರಶಸ್ತಿ ಕೊಟ್ಟರೂ ತೆಗೆದುಕೊಳ್ಳದ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ತೇಜಸ್ವಿ ಅಗ್ರಗಣ್ಯರು. ಎಲ್ಲ ಸಾಹಿತಿಗಳು ಸ್ವಲ್ಪ ಹೆಸರು ಮಾಡುತ್ತಿದ್ದಂತೆ ಬೆಂಗಳೂರು ಸೇರಿಬಿಡುವುದು ವಾಡಿಕೆ ಎಂಬಂತಾಗಿದ್ದ ದಿನಗಳಲ್ಲೇ ತೇಜಸ್ವಿ ವೈರುಧ್ಯ ದಿಕ್ಕಿನಲ್ಲಿ ನಡೆದವರು. ನಗರ ಪ್ರದೇಶ ತೊರೆದು ದಟ್ಟ ಕಾನನವನ್ನು ಅರಸಿ ಅವರು ಮೂಡಿಗೆರೆಗೆ ಅಡಿಯಿಟ್ಟರು. ಅವರ ಸಹಜ ಕುತೂಹಲವೇ ಅವರ ಎಲ್ಲ ಕೆಲಸಗಳಿಗೆ ಪ್ರೇರಣೆ. ಶ್ರದ್ಧೆಗೆ ಮತ್ತೊಂದು ಹೆಸರೇ ತೇಜಸ್ವಿ. ಕುತೂಹಲದ ಜೊತೆ ಶ್ರದ್ಧೆ ಮಿಳಿತವಾದರೆ ಒಬ್ಬ ತೇಜಸ್ವಿ ಹುಟ್ಟುತ್ತಾರೆ. ಓದುಗರಲ್ಲಿ ಸಹಜವಾಗಿಯೇ ಕುತೂಹಲ ಸೃಷ್ಟಿಸುತ್ತಾ ಹೋಗುವ ಅವರ ಬರವಣಿಗೆಯೇ ಒಂದು ಕೌತುಕ.
ತೇಜಸ್ವಿ ಬರವಣಿಗೆ ನಿಂತಿದೆ. ಅವರ ವಿಚಾರಧಾರಗಳು ನಿಂತಿಲ್ಲ. ಪ್ರತಿ ಬಾರಿ ಓದಿದಾಗಲೂ ಹೊಸ ಹೊಳಹು ತೆರೆದುಕೊಳ್ಳುತ್ತದೆ. ಮತ್ತೊಂದು ಕೌತುಕ ಮಾತನಾಡುತ್ತದೆ. ನಮಗೆ ಕಾಣದ ಯಾವುದೋ ಕಣ್ಣು ಅಲ್ಲಿ ಪಿಳಿಪಿಳಿ ಎನ್ನುತ್ತಿರುತ್ತೆ. ತಮ್ಮ ಸುತ್ತಮುತ್ತಲ ಬದುಕನ್ನೇ ವರ್ಣರಂಜಿತ ಕಾವ್ಯವಾಗಿಸಿದವರು ತೇಜಸ್ವಿ. ಯಾರನ್ನೂ ಮೆಚ್ಚಿಸಲೆಂದೋ, ಓಲೈಸಲೆಂದೋ ಅವರು ಬರೆದವರಲ್ಲ. ಅವರ ಜೀವನಪ್ರೀತಿಯೇ ನಮ್ಮೆಲ್ಲರಿಗೆ ಸದಾ ಸ್ಫೂರ್ತಿ. ತೇಜಸ್ವಿ ಮತ್ತೊಮ್ಮೆ ಹುಟ್ಟಿ ಬರಲಿ.
-ಅಮೃತ ಕಿರಣ. ಬಿ.ಎಂ.
Wednesday, April 4, 2012
ಮಂಟೇಸ್ವಾಮಿ ಕಥಾಪ್ರಸಂಗ-ಒಂದು ವಿಮರ್ಶೆ
ಬಿಡಿಸಿಡುತ್ತಾನೆಕರ್ನಾಟಕದ ಗಡಿಭಾಗ ಕೊಳ್ಳೇಗಾಲ ಭಾಗದ ಜನರ ಮನೆಯ ಆರಾಧ್ಯ ದೈವ ಮಂಟೇಸ್ವಾಮಿ ಕುರಿತ ಕಾವ್ಯ, ಅದು ಹೊಂದಿರುವ ಒಳ್ಪು ಇಂದಿಗೂ ಪ್ರಸ್ತುತ. ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ಮಂಟೇಸ್ವಾಮಿ ಕಥಾಪ್ರಸಂಗ ನಾಟಕವು ವಾಸ್ತವ ಬದುಕನ್ನು ಅಕ್ಷರಶಃ ಕನ್ನಡಿಯಂತೆ ಪ್ರತಿಬಿಂಬಿಸಿತು. ಕಾಲ ಬದಲಾದರೂ ಮಾನವನ ಮನೋಭಾವ ಮಿಸುಕಾಡಿಲ್ಲ. ರೂಪ, ಸ್ವರೂಪ ಬೇರೆಯದ್ದು ಅಷ್ಟೆ. ಜನರ ಢಂಬಾಚಾರವನ್ನು ಪರೀಕ್ಷಿಸಿ, ಬದಲಿಸಲು ಯತ್ನಿಸುವ ಒಂದು ರೂಪವಾಗಿ ಕಾಣುವ ಜಂಗಮಯ್ಯ, ಜನರ ಅಪ್ರಬುದ್ಧತೆಯನ್ನು ಎಳೆಎಳೆಯಾಗಿ . ಮಾನವ ತನ್ನ ಒಳಗಣ್ಣನ್ನು ತೆರೆದು ಸಾಮಾಜಿಕ ಬದುಕಿಗೆ ತೆರೆದುಕೊಳ್ಳುವಂತೆ ನಾಟಕವು ಪ್ರತಿ ಹಂತದಲ್ಲೂ ಸೂಚ್ಯವಾಗಿ ಸಲಹೆ ನೀಡುತ್ತಾ ಹೋಗುತ್ತದೆ.
ರಂಗಮಂಟಪದಲ್ಲಿ ಜಂಗಮಯ್ಯನ ಆರ್ಭಟವಂತೂ ಧಾರ್ಮಿಕ ಅಂಧಕಾರದಲ್ಲಿ ಮುಳುಗಿದವರನ್ನು ಬಡಿದೆಬ್ಬಿಸುತ್ತದೆ. ವಯೋವೃದ್ಧನೂ, ಜ್ಞಾನವೃದ್ಧನೂ ಆದ ಜಂಗಮಯ್ಯನು ವೇದಿಕೆಯ ಅಷ್ಟೂ ದಿಕ್ಕುಗಳಲ್ಲಿ ತನ್ನ ಪಾರಮ್ಯ ಮೆರೆಯುತ್ತಾನೆ. ಅವನ ಕುಣಿತ, ನೆಗೆತ, ಆರ್ಭಟ, ಕೂಗಾಟ ಪ್ರೇಕ್ಷಕರನ್ನು ಸ್ಥಂಭೀಭೂತರನ್ನಾಗಿ ಮಾಡುತ್ತದೆ. ನಾಟಕಕ್ಕೆ ಒಂದು ಚೌಕಟ್ಟು ಹಾಗೂ ತನ್ಮಯತೆ ಮೂಡಿಸಿದ್ದು ಹಿನ್ನೆಲೆ ಗಾಯನ. ಜನಪದ ಗೀತೆಗಳನ್ನು ನಾಟಕಕ್ಕೆ ಅಳವಡಿಸಿ, ಮನದುಂಬಿ ಹಾಡಿ, ಏಕತಾನತೆಯಿಂದ ಬಹುದೂರು ಸಾಗುವಂತೆ ಮಾಡುತ್ತದೆ. ಆ ಗೀತೆಗಳಲ್ಲಿರುವ ಲಾಲಿತ್ಯ ಎಂಥವರನ್ನೂ ತಲೆದೂಗಿಸಿತು.
ಪ್ರತಿನಿತ್ಯದ ಗೊಂದಲಗಳಿಂದ ಕೊಂಚ ಬಿಡುಗಡೆ ನೀಡಿ, ಮನವನ್ನು ಮುದಗೊಳಿಸಿದ್ದು ಎಲ್ಲ ಸಹೃದಯರ ಮೊಗದಲ್ಲೂ ಎದ್ದು ಕಾಣುತ್ತಿತ್ತು. ಮಂಟೇಸ್ವಾಮಿ ಕಥಾಪ್ರಸಂಗವು ಸಾಂಸ್ಕೃತಿಕ ರಾಯಭಾರಿ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿತು.
-ಅಮೃತ ಕಿರಣ ಬಿ.ಎಂ.

Subscribe to:
Posts (Atom)